ಸೀರೆಯುಟ್ಟು ಸ್ಕೈ ಡೈವಿಂಗ್, ಪುಣೆ ಮಹಿಳೆಯಿಂದ ವಿಶ್ವ ದಾಖಲೆ ನಿರ್ಮಾಣ

ಮಹಾರಾಶ್ಟ್ರ ಪುಣೆ ಮೂಲದ ಶೀತಲ್ ರಾಣೆ ಮಹಾಜನ್ ಸೀರೆಯುಟ್ಟು ಸ್ಕೈ ಡೈವಿಂಗ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.
ಶೀತಲ್ ರಾಣೆ ಮಹಾಜನ್
ಶೀತಲ್ ರಾಣೆ ಮಹಾಜನ್
ಮುಂಬೈ: ಮಹಾರಾಶ್ಟ್ರ ಪುಣೆ ಮೂಲದ ಶೀತಲ್ ರಾಣೆ ಮಹಾಜನ್ ಸೀರೆಯುಟ್ಟು ಸ್ಕೈ ಡೈವಿಂಗ್ ಮಾಡುವ ಮೂಲಕ  ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಸೀರೆಯುಟ್ಟು ಸ್ಕೈ ಡೈವಿಂಗ್ ಮಾಡಿದಸ್ ಮೊದಲ ಬಾರತೀಯ ಮಹಿಳೆ ಎನ್ನುವ ಖ್ಯಾತಿ ಶೀತಲ್ ಆವರದಾಗಿದೆ. ಥೈಲ್ಯಾಂಡ್‍ ನಲ್ಲಿ ನಡೆದ ಸ್ಕೈ ಡೈವಿಂಗ್ ಕಾರ್ಯಕ್ರಮದಲಿ ಪಟ್ಟಾಯ್‍ ನ ರೆಸಾರ್ಟ್ ಮೇಲಿಂದ 13,000 ಅಡಿ ಎತ್ತರದಲ್ಲಿ ಎರಡು ಬಾರಿ ಸ್ಕೈ ಡೈವಿಂಗ್ ಮಾಡಿದ್ದಾರೆ.
ಶೀತಲ್ ಹೀಗೆ ಸ್ಕೈ ಡೈವಿಂಗ್ ಮಾಡುವಾಗ ಭಾರತ ನಾರಿಯ ಸಾಂಪ್ರದಾಯಿಕ ಉಡುಪು ಸೀರೆಯನ್ನು ತೊಟ್ಟಿದ್ದದ್ದು ಒಂದು ವಿಶೇಷಚಾದರೆ 8.25 ಮೀಟರ್ ಉದ್ದದ ನವ್ ಸಾರಿ ಸೀರೆಯನ್ನುಟ್ಟು ಈ ಸಾಹಸಕ್ಕಿಳಿದದ್ದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ.
ಈ ವಿಶೇಷ ದಾಖಲೆ ಸೃಷ್ಟಿಸಿದ ಬಳಿಕ ಮಾತನಾಡಿದ ಶೀತಲ್ "ಅಂತರಾಷ್ಟ್ರೀಯ ಮಹಿಳಾ ದಿನಕ್ಕಾಗಿ ಏನಾದರೂ ವಿಶೇಷ ಸಾಧನೆ ಮಾಡಬೇಕು ಎಂದು ಯೋಚಿಸಿ ಈ ಸಾಹಸಕ್ಕಿಳಿದಿದ್ದೆ. ನಮ್ಮ ಮಹಿಳೆಯರು ತೊಡುವ ಸಾಮಾನ್ಯ ಸೀರೆಗಿಂತ ನವ್ ಸಾರಿ ಸೀರೆ ಬಹಳ ಉದ್ದವಾಗಿರುತ್ತದೆ. ಈ ಸೀರೆಯುಟ್ಟ ಬಳಿಕ ಪ್ಯಾರಾಚೂಟ್, ಹ್ಯಾಂಡ್ ಗ್ಲೌಸ್, ಹೆಲ್ಮೆಟ್, ಸಂಪರ್ಕ ಸಾಧನಹಾಗೂ ಶೂಗಳನ್ನು ಧರಿಸಿ ಸ್ಕೈ ಡೈವಿಂಗ್ ಮಾಡಿದೆ." ಎಂದರು.
ಫಿನ್‍ಲ್ಯಾಂಡ್ ನ ವೈಭವ್ ರಾಣೆ ಅವರ ಪತ್ನಿ ಶೀತಲ್ 2004ರಿಂದ ಸ್ಕೈ ಡೈವಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದುವರೆಗೆ 18 ರಾಷ್ಟ್ರೀಯ ದಾಖಲೆಗಳನ್ನು ಮಾಡಿರುವ ಈಕೆಗೆ ಪದ್ಮಶ್ರೀ ಪುರಸ್ಕಾರ ಸಹ ದೊರಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com